Tumgik
#ಕೆಂಗಣ್ಣಿಗೆ ಗುರಿ
navakarnatakatimes · 2 years
Text
Lakshana Serial: ಶ್ವೇತಾಳ ಕುತಂತ್ರಕ್ಕೆ ಸೋತ ನಕ್ಷತ್ರ, ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?
Lakshana Serial: ಶ್ವೇತಾಳ ಕುತಂತ್ರಕ್ಕೆ ಸೋತ ನಕ್ಷತ್ರ, ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?
ಧಾರಾವಾಹಿ: ಲಕ್ಷಣ ಪ್ರಸಾರ: ಕಲರ್ಸ್ ಕನ್ನಡ ಸಮಯ: ರಾತ್ರಿ 8.30 ನಿರ್ದೇಶನ: ಶಿವರಾಮ್ ಮಾಗಡಿ ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ನಕ್ಷತ್ರಳಿಗೆ ಕೊಟ್ಟ ಮಾತಿನಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎಂದು ಭೂಪತಿ ಪ್ಲನ್ ಮಾಡಿ ಅದರಲ್ಲಿ ವಿಫಲನಾಗಿದ್ದಾನೆ. ನಕ್ಷತ್ರ- ಭೂಪತಿ ಪ್ರೀತಿ ಪಯಣ ಶುರುವಾಗಿದೆ. ನಕ್ಷತ್ರ ಶಕುಂತಳಾದೇವಿಯ ಕೆಂಗಣ್ಣಿಗೆ ಗುರಿ ಶಕುಂತಳಾದೇವಿಯ ಕೆಂಗಣ್ಣಿಗೆ ಗುರಿ ಮಾಡುವಂತೆ ಪ್ಲಾನ್ ಮಾಡುತ್ತಿದ್ದಾಳೆ…
View On WordPress
0 notes
9448727067 · 3 years
Text
ಮನೆ ಬಿಟ್ಟ ಮಗ ಮಹಾನ್ ನಾಯಕನಾದ
ಅದೊಂದು ಬೃಹತ್ ಸಮಾವೇಶ, ಜನರು ಕಿಕ್ಕಿರಿದು ಸೇರಿದ್ದಾರೆ. ವೇದಿಕೆಯ ಮೇಲೆ ಅನೇಕ ನಾಯಕರಿದ್ದಾರೆ. ಇದ್ದಕ್ಕಿದ್ದಂತೆ ಸಭೆಯ ಗುಂಪಿನಿಂದ ವ್ಯಕ್ತಿಯೊಬ್ಬ ವೇದಿಕೆಯ ಮೇಲೇರಿ ರಾಜಕಾರಣಿಯೊಬ್ಬರ ಕಾಲಿಗೆ ಬಿದ್ದು ನಾನ್ಯಾರು ಗೊತ್ತೇ..? ಎಂದು ಕೇಳಿದಾಗ ಆ ರಾಜಕಾರಣಿ ಯಾರಪ್ಪ ನೀನು ಎಂದು ಪ್ರಶ್ನಿಸಿದರು. ನಾನು ನಿನ್ನ ಕಿರಿಯ ಸಹೋದರ ಎಂದಾಗ ವೇದಿಕೆಯಲ್ಲಿದ್ದವರಿಗೆಲ್ಲ ಆಶ್ಚರ್ಯ..!
ಹೀಗೆ ತನ್ನ ಸ್ವಂತ ತಮ್ಮನನ್ನೆ ಗುರ್ತಿಸಲಾಗದಷ್ಟು ಬದಲಾಗಿದ್ದರು ಆ ವ್ಯಕ್ತಿ. ಇದು ಯಾವುದೋ ಸಾಮಾಜಿಕ ನಾಟಕದ ತುಣುಕಲ್ಲ. ಕಥೆ, ಕಾದಂಬರಿಯಲ್ಲಿ ಬರುವ ಸನ್ನಿವೇಶವೂ ಅಲ್ಲ. ಸಾಮಾಜಿಕ ಪರಿವರ್ತನೆಗಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡ ರಾಜಕೀಯ ವಿಜ್ಞಾನಿ ದಾದಾ ಸಾಹೇಬ್ ಕಾನ್ಷೀರಾಮ್‍ರವರ ನಿಜ ಜೀವನದಲ್ಲಿ ನಡೆದ ಘಟನೆ.
1965ರಲ್ಲಿ ಕಾನ್ಷೀರಾಮ್ ಮನೆ ತೊರೆದ ಸುಮಾರು 27 ವರ್ಷಗಳ ನಂತರ ಪಂಜಾಬ್‍ನಲ್ಲಿ ಆಯೋಜಿಸಿದ್ದ ಸಮ್ಮೇಳನಕ್ಕೆ ಆಗಮಿಸಿದಾಗ ನಡೆದ ಘಟನೆ. ಪಂಜಾಬ್ ರಾಜ್ಯದ ರೂಪರ್ ಜಿಲ್ಲೆಯ ಖಾವಸ್‍ಪುರ ಗ್ರಾಮದ ಬಿಷನ್‍ಕೌರ್ ಮತ್ತು ಹರಿಸಿಂಗ್ ಎಂಬ ರಾಮದಾಸೀಯ ಸಿಖ್ ಕುಟುಂಬದಲ್ಲಿ 1934 ಮಾರ್ಚ 15ರಂದು ಕಾನ್ಷೀರಾಮ್ ಜನಿಸಿದರು. 4 ಜನ ಸಹೋದರಿಯರು. 3 ಜನ ಸಹೋದರರಲ್ಲಿ ಕಾನ್ಷೀರಾಮರೆ ಹಿರಿಯರಾಗಿದ್ದರು. 1956ರಲ್ಲಿ ಬಿಎಸ್ಸಿ ಪದವಿ ಪಡೆದು ಪೂನಾದ ಡಿಆರ್.ಡಿ.ಓ.ನಲ್ಲಿ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಲ್ಲಿ ನೌಕರಿಗೆ ಸೇರಿದರು. ಆಗ ಅವರ ಸಹಪಾಠಿಯಾಗಿದ್ದವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ..!
ಒಂದು ದಿನ ತನ್ನ ಕಛೇರಿಯಲ್ಲಿ ಅಂಬೇಡ್ಕರ್ ಮತ್ತು ಬುದ್ದ ಜಯಂತಿಗೆ ನೀಡಿದ್ದ ರಜಾದಿನವನ್ನು ರದ್ದು ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳೊಂದಿಗೆ ಆಕ್ರೋಶಗೊಂಡಿದ್ದರು. ಅಲ್ಲದೆ ಅಂಬೇಡ್ಕರವರನ್ನು ಕೆಟ್ಟದಾಗಿ ನಿಂದಿಸಿದಕ್ಕೆ ಆ ಮೇಲಾಧಿಕಾರಿಗಳನ್ನು ಕೊಲ್ಲಲು ಪಿಸ್ತೂಲು ಖರೀದಿಸಿದ್ದರು. ಇದೇ ಸಂದರ್ಭದಲ್ಲಿ ಅವರ ತಾಯಿಯು ನಿನಗೆ ಮದುವೆ ನಿಶ್ಚಯ ಮಾಡಿದ್ದೇವೆ ಒಪ್ಪಿಗೆ ಕೊಡು ಎಂದು ಪತ್ರ ಬರೆದಿದ್ದರು. ಆ ದಿನವೇ ಕಾನ್ಷೀರಾಂ ಸ್ನೇಹಿತರಾದ ಖಾರ್ಪಡೆಯವರು ಅಂಬೇಡ್ಕರ್ ಬರೆದಿದ್ದ ಅನಿಲೇಶನ್ ಆಫ್ ಕಾಸ್ಟ್ (ಜಾತಿ ವಿನಾಶ) ಎಂಬ ಪುಸ್ತಕವನ್ನು ಓದಲು ಉಡುಗೊರೆಯಾಗಿ ನೀಡುತ್ತಾರೆ. ಆ ಪುಸ್ತಕವನ್ನು ಒಂದೇ ದಿನ ರಾತ್ರಿಯಲ್ಲಿ ಮೂರು ಬಾರಿ ಓದಿ ಜಾತಿ ವ್ಯವಸ್ಥೆಯ ಆಳವನ್ನು ಅರಿತರಲ್ಲದೆ, ಅದನ್ನು ಕೊನೆಗಾಣಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಅವರು 3 ಪ್ರತಿಜ್ಞೆಗಳನ್ನು ಕೈಗೊಂಡರು.
1)ಬಾಬಾ ಸಾಹೇಬರ ಕನಸನ್ನು ನನಸು ಮಾಡುವವರೆಗೆ ನಾನು ಮದುವೆಯಾಗುವುದಿಲ್ಲ.
2)ನನ್ನ ರಕ್ತ ಸಂಬಂಧಿಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ.
3)ನನ್ನ ಮನೆಗೆ ಕಾಲಿಡುವುದಿಲ್ಲ. ವೈಯಕ್ತಿಕವಾಗಿ ಯಾವುದೇ ಆಸ್ತಿ ಸಂಪತ್ತನ್ನು ಹೊಂದುವುದಿಲ್ಲ ಎಂಬ ನಿರ್ಧಾರಗಳೊಂದಿಗೆ 24 ಪುಟಗಳ ಸುದೀರ್ಘ ಪತ್ರವನ್ನು ತಾಯಿಗೆ ಬರೆಯುತ್ತಾ ಮನೆಯವರ ಪಾಲಿಗೆ ನಾನು ಸತ್ತುಹೋಗಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಅಮ್ಮ ಎಂದಿದ್ದರು.
ಅವರ ಅಚಲ ನಿರ್ಧಾರ ಹೇಗಿತ್ತೆಂದರೆ 1983ರಲ್ಲಿ ತಂದೆ ಹರಿಸಿಂಗ್ ತೀರಿಕೊಂಡಾಗಲೂ ಮನೆಗೆ ಹೋಗಲಿಲ್ಲ.
ಭೌತವಿಜ್ಞಾನಿಯಾಗಿದ್ದ ಇವರು ಇ=ಎಂಸಿ ಸ್ಕೇರ್ ಎಂಬ ಸೂತ್ರವನ್ನು ಆಧರಿಸಿ ರಾಜಕೀಯ ಸೂತ್ರವೊಂದನ್ನು ಕಂಡು ಹಿಡಿದರು. ಅದುವೇ ಓಆS( ಅಗತ್ಯ, ಇಚ್ಛೆ, ಶಕ್ತಿ = ಪರಿವರ್ತನೆ) ಈ ಸೂತ್ರದ ಸಾಕ್ಷಾತ್ಕಾರಕ್ಕಾಗಿ 1965ರಲ್ಲಿ ತಮ್ಮ ವಿಜ್ಞಾನಿ ಹುದ್ದೆಗೆ ರಾಜೀನಾಮೆ ನೀಡಿ 1971ರವರೆಗೂ( ಆರು ವರ್ಷಗಳ ಕಾಲ) ಸಮಾಜ ಪರಿವರ್ತನೆಗೆ ದುಡಿದ ಮಹಾನೀಯರ ಬಗ್ಗೆ ಅಧ್ಯಯನದಲ್ಲಿ ತೊಡಗಿದರು. ಸಮಾಜದ ಅಗತ್ಯಗಳನ್ನು ಪೂರೈಸುವ ಶಕ್ತಿಯಿರುವುದು ನೌಕರರಿಗೆ ಮಾತ್ರ ಎಂದು ತಿಳಿದು ಪ್ರಥಮ ಬಾರಿಗೆ 5 ಜನ ನೌಕರರ ಸಭೆ ಮಾಡಿದರು.1971ರ ಏಪ್ರಿಲ್ 14 ರಂದು ಪೂನಾದ ಖಡಕಿ ಕ್ಷೇತ್ರದ ಶಾಲೆಯೊಂದರಲ್ಲಿ ಬಾಂಸೆಫ್ ಎಂಬ 25 ಜನರ ನೌಕರರ ಸಂಘಟನೆಯನ್ನು ಹುಟ್ಟುಹಾಕಿದರು. ಇದರ ಮೂಲಕ ದೇಶಾದಾದ್ಯಂತ ನೌಕರರನ್ನು ಸಂಘಟಿಸಿ ಡಿಸೆಂಬರ್ 6, 1978 ರಂದು ಅಧಿಕೃತವಾಗಿ ಬಾಂಸೆಫ್‍ನ್ನು ಸ್ಥಾಪಿಸಿದರು. ದೇಶಾದಾದ್ಯಂತ 2 ಲಕ್ಷ ನೌಕರರನ್ನು ಒಳಗೊಂಡಿದ್ದ ಇದರಲ್ಲಿ 10 ಸಾವಿರ ಸಕ್ರಿಯ ಕಾರ್ಯಕರ್ತರಿದ್ದರು. 500ಜನ ಪಿ.ಹೆಚ್.ಡಿ ಪದವೀಧರರು, 3 ಸಾವಿರ ಡಾಕ್ಟರ್‍ಗಳು, 15 ಸಾವಿರ ಇಂಜಿನಿಯರ್‍ಗಳು ಮತ್ತು ವಿಜ್ಞಾನಿಗಳು, 70 ಸಾವಿರ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ನೌಕರರು ಮತ್ತು ಇತರೆ ನೌಕರರಿದ್ದರು.
ನೌಕರರನ್ನು ಒಂದುಗೂಡಿಸಿದ ನಂತರ ಅಂಬೇಡ್ಕರ್‍ವಾದ ಮರಳಿ ಜೀವ ಪಡೆಯುವುದೇ ಎಂಬ ಚರ್ಚಾಕೂಟಗಳನ್ನು ಏರ್ಪಡಿಸಿ ಅದರಲ್ಲಿ ಗೊಂದಲಗಳ ಬಲೆಯಲ್ಲಿ ಸಿಕ್ಕಿಕೊಂಡಿರುವ ಬಹುಜನರು, ಅಸಮಾನತೆಯ ಮೂಲವಾಗಿರುವ ಮನುವಾದವನ್ನು ಬುಡಮೇಲು ಮಾಡುವುದು, ಅಂಬೇಡ್ಕರ್ ವಾದದ ಸರ್ವಾಂಗೀಣ ಸೋಲುಗಳು, ಅಂಬೇಡ್ಕರ್ ವಾದದ ಚಲನಶೀಲತೆ, ಎಲ್ಲಾ ಜಾತಿಯ ಶೋಷಿತರಿಗೆ ಅಂಬೇಡ್ಕರ್ ವಾದದ ಪ್ರಸ್ತುತತೆ ಎಂಬ ಚರ್ಚೆಗಳನ್ನು ಕೈಗೆತ್ತಿಕೊಂಡರು. ನೌಕರರಿಗೆ ಕಾನೂನು ಮಿತಿ ಇದ್ದಿದ್ದರಿಂದ ಈ ಕಾರ್ಯಗಳನ್ನು ಪೂರೈಸಲು 1981, ಡಿಸೆಂಬರ್ ಒಂದರಂದು ಡಿಎಸ್-4 ಎಂಬ ವಿದ್ಯಾರ್ಥಿ ಸಂಘಟನೆಯನ್ನು ಹುಟ್ಟುಹಾಕಿದರು. ಅದರ ಮೂಲಕ ಸ��ಮಾಜಿಕ ಕಾರ್ಯಾಚರಣೆ ಮತ್ತು ಸೀಮಿತ ರಾಜಕೀಯ ಕಾರ್ಯಚರಣೆಯ ಬಗ್ಗೆ ವಿಚಾರವನ್ನು ತಿಳಿಸಿದರು. ಇದರಿಂದಾಗಿ ಸುಮಾರು 50 ಸಾವಿರ ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟರು. ಇದೇ ವಿದ್ಯಾರ್ಥಿ ಸಂಘಟನೆಯ ಮೂಲಕ 1982 ಸೆಪ್ಟೆಂಬರ್ 24ರಂದು ಪೂನಾ ಒಪ್ಪಂದ ದಿಕ್ಕರಿಸಿ ಕಾರ್ಯಕ್ರಮವನ್ನು ಮಾಡಿದರು. ಓಟಿನ ಮಹತ್ವವನ್ನು ತಿಳಿಸಲು ಸೈಕಲ್ ರ್ಯಾಲಿಯನ್ನು ಹಮ್ಮಿಕೊಂಡರು. ಸ್ವತ: 3200 ಕಿ.ಮಿ. ಪ್ರವಾಸ ಮಾಡಿ ಯಾವ ಸಮಾಜವು ಓಟುಗಳನ್ನು ಮಾರಿಕೊಳ್ಳುತ್ತದೆಯೋ ಆ ಸಮಾಜ ಯಾವ ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರಿದರು. ಉತ್ತರ ಪ್ರದೇಶದಲ್ಲಿ ಸಾರಾಯಿ ನಿಷೇಧ ಚಳುವಳಿಯನ್ನು ಪ್ರಾರಂಭಿಸಿ ಎಲ್ಲಾ ವರ್ಗದ ಮಹಿಳೆಯರನ್ನು ಸಂಘಟನೆಗೆ ಸೆಳೆದುಕೊಂಡರು. ರಾಜಕೀಯೇತರ ಸಂಘಟನೆಯಾಗಿದ್ದ ಡಿಎಸ್-4 ನ್ನು(ದಲಿತ್ ಶೋಷಿತ್ ಸಂಘರ್ಷ ಸಮಿತಿ) 1984, ಏಪ್ರಿಲ್ 14ರಂದು ಬಿಎಸ್‍ಪಿ ಎಂಬ ರಾಜಕೀಯ ಚಳುವಳಿಯನ್ನಾಗಿ ಪರಿವರ್ತಿಸಿದರು. ಇದು 1984ರಲ್ಲಿ ಕಾಂಗ್ರೇಸ್ ಸೋಲಿಗೆ ಕಾರಣವಾಯಿತು.
ಪರಿಸ್ಥಿತಿಯನ್ನು ಅರಿತ ರಾಜೀವ್‍ಗಾಂಧಿಯವರು, ತಮ್ಮ ಪಕ್ಷವನ್ನು ಕಾಂಗ್ರೇಸ್‍ನೊಂದಿಗೆ ವಿಲೀನಗೊಳಿಸಿದರೆ, ಅಧ್ಯಕ್ಷಪದವಿ ನೀಡುವುದಾಗಿ ಹೇಳಿದರು. ಕಾನ್ಷೀರಾಮ್ ಇದನ್ನು ತಿರಸ್ಕರಿಸಿದರು. 1991ರಲ್ಲಿ ನರಸಿಂಹರಾವ್ ಕಾಂಗ್ರೇಸ್‍ನೊಂದಿಗೆ ಚುನಾವಣೆಯಲ್ಲಿ ಸಹಕರಿಸಿದರೆ ಉಪಪ್ರಧಾನಿ ಮಾಡುವುದಾಗಿಯೂ ಮತ್ತು ಮಾಯಾವತಿಯನ್ನು ಗೃಹಮಂತ್ರಿ ಮಾಡುವುದಾಗಿಯೂ ಆಹ್ವಾನ ಕೊಟ್ಟರು. ಅಟಲ್ ಬಿಹಾರಿ ವಾಜಪೇಯಿಯವರು ಚುನಾವಣೆಯಲ್ಲಿ ಸಹಕರಿಸಿದರೆ ರಾಷ್ಟ್ರಪತಿ ಹುದ್ದೆಗೆ ನೇಮಿಸುವುದಾಗಿ ಹೇಳಿದರು.
ಇಂತಹ ಉನ್ನತ ಹುದ್ದೆಗಳು ತಮ್ಮ ಕಾಲ ಬಳಿ ಬಂದರೂ ಅದಾವುದನ್ನೂ ಲೆಕ್ಕಿಸದೆ ಶೋಷಿತರ ಸ್ವತಂತ್ರ ರಾಜಕೀಯ ಶಕ್ತಿಯ ಏಳಿಗೆಗಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟಿದ್ದು ಬೆಲೆ ಕಟ್ಟಲಾಗದ ಸಂಗತಿ.
ಮಂಡಲ್ ವರದಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ. ಎಂಬ ಘೋಷಣೆಗಳನ್ನು ಸಂದರ್ಭಕ್ಕೆ ತಕ್ಕಂತೆ ಹೇಳಿಕೊಟ್ಟು ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. 1995ರಲ್ಲಿ ಬಿಜೆಪಿ ಯೊಂದಿಗೆ ಅಧಿಕಾರ ಹೊಂದಾಣಿಕೆಯ ಮೂಲಕ ಆಡಳಿತ ನಡೆಸುವಾಗ ಸೆಪ್ಟೆಂಬರ್ 17 ರಂದು ಪೆರಿಯಾರ್ ಮೇಳವನ್ನು ನಡೆಸಿ ವಾಜಪೇಯಿಯವರ ಕೆಂಗಣ್ಣಿಗೆ ಗುರಿಯಾದರು. ಇದನ್ನು ಖಂಡಿಸಿದ ವಾಜಪೇಯಿಯವರು ಬೆಂಬಲ ಹಿಂತೆದುಕೊಳ್ಳುವುದಾಗಿ ಬೆದರಿಸಿದರು. ಇದಕ್ಕೆ ಕಾನ್ಷೀರಾಮ್ ನಮಗೆ ಸರ್ಕಾರ ಮುಖ್ಯವಲ್ಲ ನಮ್ಮ ಹಿರಿಯರ ಸಾಧನೆಗಳನ್ನು ಜನತೆಗೆ ತಿಳಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯ ಅಧಿಕಾರವೇ ನಮ್ಮ ಅಂತಿಮ ಗುರಿಯಲ್ಲ ನಮ್ಮ ಧ್ಯೇಯೋದ್ದೇಶಗಳನ್ನು ಪೂರೈಸಲು ರಾಜಕೀಯವು ಒಂದು ಅಸ್ತ್ರ ಅಷ್ಟೆ ಎಂದಿದ್ದರು.
ಅಂಬೇಡ್ಕರ್ ಹಾಕಿ ಕೊಟ್ಟ ರಾಜಮಾರ್ಗದಲ್ಲಿಯೇ ನಡೆದ ಈ ಸಿಖ್ ಧರ್ಮಿಯ ವ್ಯಕ್ತಿ ಅಶೋಕನ ಕಾಲದ ಭಾರತ ಹೇಗಿತ್ತೋ ಅದನ್ನು ಮರಳಿ ಸ್ಥಾಪಿಸುವುದೇ ನನ್ನ ಜೀವನದ ಪರಮ ಗುರಿ ಎಂದು ಸಾರಿದರು. 2003 ಮಾರ್ಚ 15 ರಂದು ತಮ್ಮ ಜನ್ಮ ದಿನದಂದು ಮಹಾರಾಷ್ಟ್ರದ ಶಿವಾಜಿ ಪಾರ್ಕನಲ್ಲಿ ಮಾತನಾಡುತ್ತಾ, 2006, ಅಕ್ಟೋಬರ್ 14ಕ್ಕೆ ಬಾಬಾ ಸಾಹೇಬರು ಧರ್ಮಾಂತರ ಮಾಡಿ 50 ವರ್ಷಗಳು ತುಂಬಲಿವೆ, ಈ ಸುವರ್ಣ ವರ್ಷದಂದು ನಾನು ನನ್ನ 3 ಕೋಟಿ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಎಂದು ಸಾರಿದರು. ದುರಾದೃಷ್ಠವಶಾತ್ ಈ ಹೇಳಿಕೆಯನ್ನು ನೀಡಿದ ಕೆಲವೇ ದಿನಗಳಲ್ಲಿ ಮೆದುಳು ಪಾಶ್ರ್ವವಾಯುವಿಗೆ ತುತ್ತಾದರು.
ಅಂಬೇಡ್ಕರರ ನಂತರ ಶೋಷಿತರಿಗೆ ರಾಜಕೀಯವಾಗಿ ನ್ಯಾಯಕೊಡಲು ರಾಷ್ಟ್ರಮಟ್ಟದಲ್ಲಿ ಶ್ರಮಿಸಿದ ವ್ಯಕ್ತಿಗಳಲ್ಲಿ ಕಾನ್ಷಿರಾಂ ಒಬ್ಬರು. ಆದರೆ ದಲಿತರು ಮತ್ತು ಹಿಂದುಳಿದ ವರ್ಗಗಳು ಇವರನ್ನು ಸಾಮೂಹಿಕವಾಗಿ ರಾಷ್ಟ್ರನಾಯಕರೆಂದು ಗುರ್ತಿಸುವಲ್ಲಿ ಎಡವಿದ್ದಾರೆ. ಉತ್ತರ ಭಾರತದ ಎಲ್ಲಾ ಶೋಷಿತ ವರ್ಗಗಳು ಇವರ ಮಾರ್ಗವನ್ನು ಅನುಸರಿಸಿವೆ. ಇದರಿಂದಾಗಿಯೇ ಇಂದು ಉತ್ತರ ಭಾರತದಲ್ಲಿ ಮುಸ್ಲೀಮರನ್ನು ನೀವು ಯಾರು ಎಂದು ಕೇಳಿದರೆ, ನಾವು ಬಹುಜನ ಎನ್ನುತ್ತಾರೆ ಅಷ್ಠರ ಮಟ್ಟಿಗೆ ಕಾನ್ಷೀರಾಮ್ ಉತ್ತರ ಭಾರತದಲ್ಲಿ ಪ್ರಭಾವ ಬೀರಿದ್ದಾರೆ. ಆದರೆ ದಕ್ಷಿಣದಲ್ಲಿ ಇವರ ಪ್ರಭಾವ ಅಷ್ಟಕಷ್ಟೆ. ರಾಜಕೀಯವಾಗಿ ಇವರನ್ನು ಗುರ್ತಿಸಿದ್ದಾರೆಯೇ ವಿನಹ: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ದೃಷ್ಠಿಕೋನದಲ್ಲಿ ಇವರ ಕೊಡುಗೆಯನ್ನು ಯಾರೂ ಗಮನಿಸದಿರುವುದು ವಿಪರ್ಯಾಸದ ಸಂಗತಿ. ಇವರಿಂದಾಗಿಯೇ ಇತಿಹಾಸದಲ್ಲಿ ಕೇವಲ ಮನುವಾದಿ ವ್ಯವಸ್ಥೆಯನ್ನು ಪೂಷಿಸಿದ್ದ ನಾಯಕರನ್ನು ಮಾತ್ರ ಸಮಾಜ ಸುಧಾರಕರೆಂದು ಬಿಂಬಿಸಿದವರನ್ನು ಬದಿಗೆ ಸರಿಸಿ ಪುಲೆ, ಶಾಹು, ಪೆರಿಯಾರ್, ಸೇರಿದಂತೆ ಇತರ ಹಿಂದುಳಿದ ನಾಯಕರ ಹೋರಾಟವನ್ನು ಪಠ್ಯಕ್ರಮದಲ್ಲಿ ಸೇರಿಸುವಂತಾಯಿತು. ಅಷ್ಠೇ ಏಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಯನ್ನು ಸ್ವತ: ಕನ್ನಡಿಗರಿಗೆ ತೋರಿಸಿಕೊಟ್ಟವರು ಈ ಕಾನ್ಷೀರಾಮ್..!
ಆ ನಂತರವೇ ಒಡೆಯರ ಬಗ್ಗೆ ಸಂಶೋಧನೆಗಳು ಶುರುವಾಗಿದ್ದು. ಇಂದು ಎಲ್ಲ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಅಂಬೇಡ್ಕರ್ ಫೋಟೋವನ್ನು ಹಾಕಿಕೊಳ್ಳುತ್ತಿದ್ದರೆ, ದಲಿತ ಸಂಘಟನೆಗಳು ಬುದ್ದ, ಪುಲೆ, ಶಾಹು, ಪೆರಿಯಾರರ ಚಿತ್ರಗಳನ್ನು ತಮ್ಮ ಕರಪತ್ರದಲ್ಲಿ ಮುದ್ರಿಸುತ್ತಿದ್ದರೆ, ದಲಿತ ಹಿಂದುಳಿದವರು ಇಂದು ಬೌದ್ದಧರ್ಮಕ್ಕೆ ಮತಾಂತರವಾಗುತ್ತಿದ್ದರೆ, ಅದು ಕಾನ್ಷೀರಾಮ್ ಕೊಡುಗೆ. ಅಷ್ಠರ ಮಟ್ಟಿಗೆ ಕಾನ್ಷೀರಾಮ್ ದೇಶದ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದಾರೆ.
ಸಾಧಿಸುವ ಛಲವಿದ್ದರೆ, ಯಾವುದನ್ನು ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿ ನಿಲ್ಲಬಲ್ಲ ವ್ಯಕ್ತಿ ಕಾನ್ಷೀರಾಮ್ ಎಂದರೆ ಅತಿಶಯೋಕ್ತಿಯಲ್ಲ. ಕೈಯಲ್ಲಿದ್ದ ನೌಕರಿಗೆ ರಾಜೀನಾಮೆ ನೀಡಿ, ಸೈಕಲ್ ಬಾಡಿಗೆಗೆ ಹಣ ಸಾಲದಾದಾಗ ಊಟವನ್ನು ಮಾಡದೆ ಹಸಿವಿನಿಂದ ಬಳಲಿ ತನ್ನ ಸಹಪಾಠಿಗಳು ಕೊಟ್ಟಿದ್ದ ರನ್ನಾಪೇಟೆಯ ಕಾರ್ಯಾಲಯದಲ್ಲಿ ಓದುವ ಪೇಪರನ್ನು ಹಾಸಿಕೊಂಡು ಮಲಗಿ, ವಿಪರೀತ ಚಳಿಯಾದಾಗ ಸ್ಮಶಾನದಲ್ಲಿ ಬಿಸಾಡಿದ್ದ ಮಾರ್ವಾಡಿಯೊಬ್ಬನ ಶವದ ಕೋಟನ್ನು ತೊಟ್ಟು ತಮ್ಮ ಸಂಕಟವನ್ನು ಯಾರೊಂದಿಗೂ ಹೇಳಿಕೊಳ್ಳದೆ ತನ್ನ ಆರೋಗ್ಯವನ್ನು ಲೆಕ್ಕಿಸದೆ ಜೀವವನ್ನೇ ಬಹುಜನರ ಏಳಿಗೆಗಾಗಿ ಮುಡುಪಿಟ್ಟದ್ದು ಅವರ ಆತ್ಮ ಸ್ಥೆರ್ಯಕ್ಕೆ ಸರಿಸಾಟಿಯೇ ಇಲ್ಲ. ಮೂಲೆಗುಂಪಾಗಿದ್ದ ಅಂಬೇಡ್ಕರರ ವಿಮೋಚನಾ ರಥವನ್ನು ಬಾಂಸೆಫ್, ಡಿಎಸ್-4ಗಳ ಮೂಲಕ ಅಲಂಕರಿಸಿ, ಮಹಾರಾಷ್ಟ್ರದಲ್ಲಿಯೇ ಮಹಾರರಿಗೆ ಭೀಮವಾದವನ್ನು ಭಿತ್ತಿ, ಉತ್ತರದ ರಾಜನೆನಿಸಿದ್ದ ಮಾಂಡದ ಚಂದ್ರಶೇಖರ್‍ಗೆ ಮಾಂಡಕ್ಷೇತ್ರದಲ್ಲಿಯೇ ಛಾಲೆಂಜ್ ಮಾಡಿ, ಇಡೀ ಭಾರತದ ಅಧಿಕಾರವನ್ನು ಸುಲಭವಾಗಿ ಗಳಿಸಿಕೊಡುವ ಉತ್ತರ��್ರದೇಶದ ರಾಜಕೀಯವನ್ನೇ ಬದಲಿಸಿ, ಕೇಂದ್ರದಲ್ಲಿ ಅತಂತ್ರ ಸಂಸತ್ತು ಸೃಷ್ಠಿಸಿ ಶತಮಾನಗಳಿಂದ ವಂಚಿತವಾಗಿದ್ದ ಅವಕಾಶಗಳನ್ನು ಎಲ್ಲಾ ಶೋಷಿತರ ಮನೆಬಾಗಿಲಿಗೆ ಬರುವಂತೆ ಮಾಡಿದ್ದು ಇವರ ಅಪ್ರತಿಮ ರಾಜಕಾರಣಕ್ಕೆ ಸಾಕ್ಷಿ. ಆದ್ದರಿಂದಲೆ ಭಾರತದ ಮಾಧ್ಯಮಗಳು ಇವರನ್ನು ಭಾರತದ ರಾಜಕೀಯ ಕ್ಷಿಪಣಿ ಎಂದು ಕರೆದಿದ್ದವು. ಇವರ ರಾಜಕೀಯ ಪ್ರವೇಶದಿಂದಾಗಿಯೇ ದೇವಿಲಾಲ್, ವಿ.ಪಿ.ಸಿಂಗ್, ದೇವೇಗೌಡರಂತಹ ಶೂದ್ರ ನಾಯಕರು ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದು, ಲಾಲು. ಮುಲಾಯಮ್‍ಸಿಂಗ್ ನಂತವರು ಕಿಂಗ್‍ಮೇಕರ್‍ಗಳಾಗಿದ್ದು, ಇವರಿಂದಾಗಿಯೇ ಇಂದು ಎಲ್ಲಾ ಶೋಷಿತ ಜನಾಂಗಗಳು ತಮ್ಮ ರಾಜಕೀಯ ಶಿಕ್ಷಣದ ಬಗ್ಗೆ ಜಾಗೃತಿಯಾಗುತ್ತಿವೆ. ಇಂತಹ ಮಹಾನ್ ಸಾಧನೆಯನ್ನು ಮಾಡಿದ ಕಾನ್ಷೀರಾಮ್ ಭಾರತದ ಭವಿಷ್ಯದ ನಿರ್ಮಾತೃವಾಗಿದ್ದಾರೆ.
ಸಂಗ್ರಹ : ಸ್ಟೀವನ್ ಪ್ರಕಾಶ್ ಹೆಚ್.ಸಿ. ಹಿರಿಯೂರು,ಸಕಲೇಶಪುರ.
( ಮಾರ್ಚ 15 ಕಾನ್ಷೀರಾಮ್ ಜನ್ಮದಿನದ ಪ್ರಯುಕ್ತ ಈ ಲೇಖನ)
Tumblr media Tumblr media Tumblr media
0 notes
Photo
Tumblr media
ಜೇನು ಕೃಷಿ ಅನ್ನೋದು ಒಂದು ರೀತಿಯ ಅನುವಂಶೀಯ ಕಲೆ ಇದ್ದಹಾಗೆ ಇದರ ಹೊರತಾಗಿಯೂ ಕೆಲವು ಜೇನುಕೃಷಿಕರು ರೂಪಗೊಂಡಿದ್ದಾರೆ ನನಗಂತು ಅಜ್ಜ ಮತ್ತು ಮಾವನಿಂದ ಬಂದ ಬಳುವಳಿಯೇ ಸೈ.ಪ್ರಾಥಮಿಕ ಶಾಲಾ ದಿನಗಳಿಂದಲೂ ಇದರ ಮೇಲೆ ಇನ್ನಿಲ್ಲದ ಒಲವು ಮೂಡಿಸಿಬಿಟ್ಟಿತ್ತು ಆರನೇ ತರಗತಿಯಿಂದಲೂ ಜೇನುಕುಟುಂಬಗಳನ್ನು ಗೂಡಿಗೆ ಸೇರಿಸುವುದು ಪದೆ ಪದೆ ವೈಫಲ್ಯ ಮತ್ತೆ ಬಿಡದ ಹುಚ್ಚು ಅಂತು ಇಂತು ಎಸ್ ಎಸ್ ಎಲ್ ಸಿ ಓದುವ ಹೊತ್ತಿಗೆ ಆರು ಜೇನುಕುಟುಂಬಗಳನ್ನು ಸಾಕಿ ಜೇನುತುಪ್ಪ ತೆಗೆದು ಊರಿನಲ್ಲಿ ಕೆಲವರ ಕೆಂಗಣ್ಣಿಗೆ ಗುರಿ ಆದೆ ಹೊಸ ಪೆಟ್ಟಿಗೆಗಳನ್ನು ಕೊಳ್ಳಲು ಶಕ್ತಿಯಿಲ್ಲದ ಆ ದಿನಗಳಲ್ಲಿ ಕೆಲವು ಮನೆಗಳಲ್ಲಿ ಜೇನು ಕೃಷಿ ಅಸಾಧ್ಯ ಎಂದು ಅಟ್ಟ ಸೇರಿದ ಪೆಟ್ಟಿಗೆಗಳನ್ನು ಕಾಡಿ ಬೇಡಿ ತೆಗೆದುಕೊಂಡು ಬರುತ್ತಿದ್ದೆ ಈ ಅಲ್ಪ ಯಶಸ್ಸಿನ ಜೊತೆಗೆ ಕಾಲೇಜಿನ ವಿಧ್ಯಾಭ್ಯಾಸಕ್ಕೋಸ್ಕರ ಪರ ಊರಿನಲ್ಲಿ ಇರಬೇಕಾದಂತಹ ಪರಿಸ್ಥಿತಿ,ಉದ್ಯೋಗಕ್ಕಾಗಿ ಅಲೆದಾಟ, ಉದ್ಯೋಗದಲ್ಲಿ ಕಾಲೂರಲೇ ಬೇಕಾದಂತಹ ಪರಿಸ್ಥಿತಿ ಜೇನುಕೃಷಿಯಿಂದ ದಶಕಗಳ ಕಾಲ ದೂರವಿರಿಸಿಬಿಟ್ಟಿತು ಆದರೂ ಮನಸ್ಸು ಮಾತ್ರ ಜೇನುಕೃಷಿಯಲ್ಲೇ ಅಲೆದಾಡುತ್ತಿತ್ತು ಮತ್ತೆ ಈಗ ಮೂರು ವರ್ಷಗಳಿಂದ ಸ್ನೇಹಿತನ ಸಹಕಾರದಿಂದಾಗಿ ಜೇನುಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು ಮನಸ್ಸಿಗೆ ಏನೋ ಒಂದು ಖುಷಿ ಕೊಟ್ಟಿದೆ ಸಧ್ಯ ಈಗ 80 ಜೇನುಕುಟುಂಬಗಳು ಇವೆ ಈ ಸೀಜನ್ ನಲ್ಲಿ 200 ಜೇನುಕುಟುಂಬಕ್ಕೆ ವಿಸ್ತರಿಸುವ ಇರಾದೆ ಕೂಡ ಇದೆ. ಹಾಗೆಯೇ ಕಳೆದ ಸಾಲಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಜೇನುಕುಟುಂಬಗಳನ್ನು ಆಸಕ್ತಿ ಇರುವ ಕೃಷಿಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸಿದ ಸಂತೃಪ್ತಿ ಕೂಡ ಸರ್ಕಾರದಿಂದ ಬರುವ ಸಹಾಯಧನಗಳಲ್ಲಾದ ಮೋಸ , ರೋಗಗ್ರಸ್ಥ ಕುಟುಂಬಗಳು, ರಾಣಿ ರಹಿತ ಕುಟುಂಬಗಳು ಇಡೀ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿ ಇಡೀ ತೋಟಗಾರಿಕೆ ಇಲಾಲಕೆಯನ್ನು ಮತ್ತು ಕೆಲವು ವ್ಯಕ್ತಿಗಳ ದ್ವೇಷಕಟ್ಟಿಕೊಳ್ಳುವಂತೆ ಮಾಡಿದೆ ಕೊನೇಗೂ ಅರಿವಾಗಿದ್ದು ಸರ್ಕಾರದಿಂದ ಬರುವ ರೈತ ಸ್ನೇಹಿ ಯೋಜನೆಗಳಾವುದು ರೈತರಿಗೆ ತಲುಪದೇ ಅಧಿಕಾರಿ ವರ್ಗಗಳ ಬೊಕ್ಕಸ ತುಂಬಿಸುತ್ತಿವೆ ಅನ್ನೋದು ವಿಷಾಧನೀಯ ಈ ನಿಟ್ಟಿನಲ್ಲಿ ಈ ಬಾರಿ ಜೇನುಕುಟುಂಬಗಳನ್ನು, ಜೇನುಪೆಟ್ಟಿಗೆಗಳನ್ನು , ಜೇನುಕೃಷಿಗೆ ಬೇಕಾಗುವ ಉಪಕರಣಗಳನ್ನು ತಲುಪಿಸುವ ಹಂಬಲವಿದೆ 9481351098, 6361294094 https://www.instagram.com/p/CE-b4ENH8r1/?igshid=cbzmhlhvb3fu
0 notes
cinecaptain-blog · 7 years
Photo
Tumblr media
ತಪ್ಪು ತಿಳಿಬೇಡಿ…ಉಪೇಂದ್ರ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹಾಗಲ್ಲ..! ಕನ್ನಡದ ಗಾಯಕ ರಾಜೇಶ್ ಅವರು ಸದ್ಯ ನಟ ಉಪೇಂದ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ಕಿರುತೆರೆಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ ರಾಜೇಶ್ ಕೃಷ್ಣನ್ ಉಪೇಂದ್ರ ಬಗ್ಗೆ ಒಂದು ಕಾಮೆಂಟ್ ಮಾಡಿದ್ದರು.
0 notes
navakarnatakatimes · 2 years
Text
ಪ್ರವಾದಿ ಇಂದು ಬದುಕಿದ್ದರೆ…:ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾದ ತಸ್ಲೀಮಾ ನಸ್ರಿನ್
ಪ್ರವಾದಿ ಇಂದು ಬದುಕಿದ್ದರೆ…:ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾದ ತಸ್ಲೀಮಾ ನಸ್ರಿನ್
ಢಾಕಾ : ಪ್ರವಾದಿ ವಿರುದ್ಧದ ಹೇಳಿಕೆ ಖಂಡಿಸಿ ಭಾರತದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರಿನ್ ಟ್ವೀಟ್ ಒಂದನ್ನು ಮಾಡಿ ಮತ್ತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ”ಪ್ರವಾದಿ ಮೊಹಮ್ಮದ್ ಇಂದು ಬದುಕಿದ್ದರೆ , ಪ್ರಪಂಚದಾದ್ಯಂತದ ಮುಸ್ಲಿಂ ಮತಾಂಧರ ಹುಚ್ಚುತನವನ್ನು ಕಂಡು ಬೆಚ್ಚಿಬೀಳುತ್ತಿದ್ದರು” ಎಂದು ತಸ್ಲೀಮಾ ಟ್ವೀಟ್ ನಲ್ಲಿ ಬರೆದಿದ್ದಾರೆ. ಹಿಜಾಬ್ ಸೇರಿದಂತೆ ಹಲವು ಇಸ್ಲಾಂ ನ ಹಲವು ವಿಚಾರಗಳನ್ನು ಬಹಿರಂಗ ವಾಗಿ ಟೀಕಿಸಿ…
View On WordPress
0 notes